Friday, October 11, 2013

ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) ಬೆಂಗಳೂರು ಚುನಾವಣೆ 2013.

ಮಿತ್ರರೇ, 

ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) ಬೆಂಗಳೂರು ಇದರ ಚುನಾವಣೆ ನಿರ್ಧಾರವಾಗಿದೆ. ದಿನಾಂಕ ೨೦-೧೦-೨೦೧೩ , ಭಾನುವಾರದಂದು . ಸ್ಥಳ: ಬಾಲಕಿಯರ ಸರ್ಕಾರಿ ಪದವಿ ಪೂರ್ವ ವಿದ್ಯಾಲಯದ ಸಭಾಂಗಣ , ೪ ನೇ ಮುಖ್ಯ ರಸ್ತೆ, ೧೩ ನೇ ಅಡ್ಡ ರಸ್ತೆ , ಮಲ್ಲೇಶ್ವರ , ಬೆಂಗಳೂರು. ಬೆಳಿಗ್ಗೆ ೧೦ ಗಂಟೆಗೆ. 

ಮತ ಚಲಾಯಿಸಲು ತಾವು ಕಡ್ಡಾಯವಾಗಿ ನಿಮ್ಮ ಹೆಸರಿನಲ್ಲಿ ಬಂದ ಕಳೆದ ಆರು ತಿಂಗಳುಗಳೊಳಗಿನ ಹವ್ಯಕ ಮಾಸ ಪತ್ರಿಕೆಯೊಂದನ್ನು ಮತ್ತು ಗುರುತಿಗಾಗಿ ಸರಕಾರದಿಂದ ಮಾನ್ಯತೆ ಪಡೆದ ಯಾವುದಾದರೊಂದು ದಾಖಲೆ, ( ಸರಕಾರದ ಮತದಾರರ ಗುರುತಿನ ಚೀಟಿ, ಅಧಾರ ಕಾರ್ಡ್ , ರೇಶನ್ ಕಾರ್ಡ್ , ಪಾನ್ ಕಾರ್ಡ್ , ಡ್ರೈವಿಂಗ್ ಲೈಸೆನ್ಸ್ , ಇತ್ಯಾದಿ ಯಾವುದಾದರೊಂದನ್ನು ) ತರಬೇಕು . ( ಝೆರೊಕ್ಷ ಕಾಪಿಯೊಂದನ್ನೂ ತನ್ನಿ ).

ತಮಗೆಲ್ಲ ತಿಳಿದಿರುವಂತೆ ನಾನು ಒಬ್ಬ ಅಭ್ಯರ್ಥಿ. ತಾವೆಲ್ಲ ನನಗೆ ಒಂದು ಮತ ನೀಡಿ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ತಾವು ಮತ ನೀಡಿ ನನಗೆ ನಿರ್ದೇಶಕ ಸ್ಥಾನದಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟರೆ ನನ್ನ ಮುಂದಿರುವ ಕನಸುಗಳು / ಯೋಜನೆಗಳು ಇಂತಿವೆ :

೧. ಎಲ್ಲ ನಿರ್ದೇಶಕರ ಸಹಕಾರ ಕೋರಿ ನಾನು ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) ಬೆಂಗಳೂರು ಇದರ ಅದ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ. ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದರೆ ನಮ್ಮ ಹವ್ಯಕರಿರುವ ಎಲ್ಲ ಪ್ರದೇಶದ ನಿರ್ದೇಶಕರಿಗೂ ಬೇರೆ ಬೇರೆ ಸೂಕ್ತ ಹುದ್ದೆಗಳನ್ನು ನೀಡಿ ಎಲ್ಲರ ಸಹಕಾರದೊಂದಿಗೆ ಅಧ್ಯಕ್ಷ ಸ್ಥಾನ ನಿರ್ವಹಿಸುತ್ತೇನೆ. ಮತ್ತು

೨. ಹಾಲಿ ಅಧ್ಯಕ್ಷರು ಕೈಗೆತ್ತಿಕೊಂಡಿರುವ ಕಟ್ಟಡದ ಕಾರ್ಯವನ್ನು ಎಲ್ಲ ಸದಸ್ಯರು, ನಿರ್ದೇಶಕರು, ಸಮಾಜದ ಗಣ್ಯ ವ್ಯಕ್ತಿಗಳು ... ಮುಂತಾದವರ ಸಹಕಾರದೊಂದಿಗೆ ಪೂರ್ಣಗೊಳಿಸುತ್ತೇನೆ.

೩. ಮಹಾಸಭೆಯ ಎಲ್ಲಾ ಕೆಲಸ ಕಾರ್ಯಗಳಲ್ಲೂ ಸಂಪೂರ್ಣ ಪಾರದರ್ಶಕತೆ ಕಾಯ್ದು ಕೊಳ್ಳುತ್ತೇನೆ. ಗೌರವಾನ್ವಿತ ಯಾವುದೇ ಸದಸ್ಯರು ಯಾವುದೇ ಮಾಹಿತಿ ಪಡೆಯಬಯಸಿದಲ್ಲಿ ಸೂಕ್ತ ಸಮಯದಲ್ಲಿ ದೊರೆಯುವ ವ್ಯವಸ್ಥೆ , ಎಲ್ಲ ನಿರ್ದೇಶಕರ ಸಹಕಾರದೊಂದಿಗೆ , ಏರ್ಪಾಡು ಮಾಡುತ್ತೇನೆ.

೪. ಬೆಂಗಳೂರಿನಿಂದ ಹೊರಗೆ ವಾಸ್ತವ್ಯವಿರುವ ನಿರ್ದೇಶಕರು ಎಲ್ಲ ಕಾರ್ಯ ಕಲಾಪಗಳಲ್ಲಿ ಹಾಜರಿರಲು ಅವರ ವಾಸ್ತವ್ಯದ ಸಮೀಪದ ರೈಲು ನಿಲ್ದಾಣದಿಂದ ಮಹಾಸಭೆಗೆ ಬರಲು ಟಿಕೆಟ್ ವ್ಯವಸ್ಥೆಯನ್ನು , ನಿರ್ದೇಶಕರೆಲ್ಲರ ಸಹಕಾರ , ಸಮ್ಮತಿಯೊಡನೆ ಏರ್ಪಾಡುಮಾಡಬಯಸುತ್ತೇನೆ.

೫. ಮಹಾಸಭೆಯ ಅಭಿವೃದ್ಧಿಗೆ ಕೈ ಜೋಡಿಸಬಯಸುವ ಪ್ರತಿಯೊಬ್ಬ ಸದಸ್ಯರಿಗೂ ಮುಕ್ತ ಅವಕಾಶ ಕಲ್ಪಿಸಲು ಎಲ್ಲ ನಿರ್ದೇಶಕರ ಸಹಕಾರದೊಂದಿಗೆ ವ್ಯವಸ್ಥೆ ಮಾಡುತ್ತೇನೆ.

೬. ಮಹಾಸಭೆಯ ಎಲ್ಲ ಕಾರ್ಯಕ್ರಮಗಳ - ಹಣಕಾಸಿಗೆ ಸೂಕ್ತ ಜಾಹೀರಾತು, ದೇಣಿಗೆ ಪಡೆದು ಮಹಾಸಭೆಯ ಬೊಕ್ಕಸಕ್ಕೆ ಯಾವುದೇ ರೀತಿಯ ಹೊರೆಯಾಗದಂತೆ ವ್ಯವಸ್ಥೆ ಗೊಳಿಸುವತ್ತ ನಿರ್ದೇಶಕರೆಲ್ಲ ಸಲಹೆ ಸೂಚನೆ ಪಡೆದು ಕಾರ್ಯಪೃವೃತ್ತನಾಗುತ್ತೇನೆ.

೭. ನಮ್ಮ ಹವ್ಯಕ ಸಮಾಜದ ಸದಸ್ಯರೆಲ್ಲ ವಿವಿಧ ಉದ್ಯೋಗಗಳಲ್ಲಿ ವಿವಿಧ ಪ್ರದೇಶಗಳಲ್ಲಿ ತೊಡಗಿಕೊಂಡಿದ್ದಾರೆ. ನಮ್ಮ ಹವ್ಯಕರೆಲ್ಲರ ಗಣತಿ ಕಾರ್ಯ ಕೈಗೊಂಡು , ಅವರವರ ಉದ್ಯೋಗಾನುಸಾರ ಮಾಹಿತಿ ಕ್ರೋಢಿಕರಿಸಲು ಆನ್ಲೈನ್ ( online ) ವ್ಯವಸ್ಥೆ ಮಾಡುವತ್ತ ನಿರ್ದೇಶಕರ ಸಹಾಯ, ಸಹಕಾರ ಪಡೆಯುತ್ತೇನೆ.

೮. ಒಂದು ೪೦ x ೬೦ ಸೈಟ್ ಬೆಂಗಳೂರಿನಲ್ಲಿ ಮಹಾಸಭೆಯ ಹೆಸರಿನಲ್ಲಿ ದಾನ ಪಡೆದು / ಸರಕಾರದಿಂದ ಪಡೆದು / ಖರೀದಿಸಿ ಆರ್ಥಿಕವಾಗಿ ಬಲಾಢ್ಯರಾಗಿರುವ ದೊಡ್ಡ ದೊಡ್ಡ ಖಾಸಗಿ ಕ್ಷೇತ್ರದ ಕಂಪನಿಗಳನ್ನು / ಸರಕಾರೀ , ಅರೆ ಸರಕಾರೀ ಕ್ಷೇತ್ರದ ಗಣ್ಯರನ್ನು / ನಮ್ಮ ಸಮಾಜದ ಅರ್ಥಿಕ ಬಲಾಡ್ಯರನ್ನು , ಎಲ್ಲ ನಿರ್ದೇಶಕರ ಸಹಾಯ , ಸಹಕಾರದೊಂದಿಗೆ ಕಾಡಿ, ಬೇಡಿ ಅವರ ಪ್ರಾಯೋಜಕತ್ವದಿಂದ ಒಳ್ಳೆಯ ಆದಾಯ ತರುವ ಒಂದು ಉತ್ತಮ ಸಭಾಭವನ, ನಮ್ಮ ಸಮಾಜದ ಆರ್ಥಿಕವಾಗಿ ಹಿಂದುಳಿದಿರುವ ವಿಧ್ಯಾರ್ಥಿಗಳಿಗಾಗಿ ಒಂದು ನೂರು ಮಕ್ಕಳು ಇರಬಲ್ಲ ಉಚಿತ ವಿಧ್ಯಾರ್ಥಿಭವನ ( free hostel ) , ಹಳ್ಳಿಗಳಿಂದ ಬರುವ ಹವ್ಯಕರಿಗೆ ನಾಲ್ಕು ದಿನ ಉಚಿತವಾಗಿ ತಂಗಲು ಒಂದು ನೂರು ರೂಂ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವದು.

ಮಿತ್ರರೇ, ಈ ಎಲ್ಲ ಕನಸುಗಳು ನನಸಾಗಲು ತಮ್ಮ ಪ್ರಯತ್ನ ಬಹು ಮುಖ್ಯವಾದುದು. ಆದ್ದರಿಂದ ನಾನು ನಿರ್ದೇಶಕನಾಗಿ ಆಯ್ಕೆಯಾಗಲು ನಿಮಗೆ ಪರಿಚಯವಿರುವ , ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) ಬೆಂಗಳೂರು ಇದರ ಸದಸ್ಯತ್ವವಿರುವ ಎಲ್ಲರನ್ನು ಸಂಪರ್ಕಿಸಿ , ಅವರೆಲ್ಲ ನನಗೆ ವೋಟು ಮಾಡುವಂತೆ ಪ್ರಯತ್ನ ಮಾಡಬೇಕಾಗಿ ಸವಿನಯ ವಿನಂತಿ.

Harihar S Bhat , Bangalore.
October 11, 2013.

No comments:

Post a Comment