Friday, October 11, 2013

ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) , ಬೆಂಗಳೂರು : ೨೦೧೨ - ೧೩ ನೇ ವಾರ್ಷಿಕ ಸಭೆ ಕುರಿತು.

ಮಿತ್ರರೇ ,

ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) , ಬೆಂಗಳೂರು : ೨೦೧೨ - ೧೩ ನೇ ವಾರ್ಷಿಕ ಸಭೆ ಕುರಿತು.


ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) , ಬೆಂಗಳೂರು : - ೨೦೧೨ - ೧೩ ರ ಸರ್ವಸದಸ್ಯರ ೭೧ ನೇ ವಾರ್ಷಿಕ ಸಭೆಯನ್ನು ದಿನಾಂಕ ೨೦-೧೦-೨೦೧೩ , ಭಾನುವಾರದಂದು ಕರೆಯಲಾಗಿದೆ. ಸ್ಥಳ: ಬಾಲಕಿಯರ ಸರ್ಕಾರಿ ಪದವಿ ಪೂರ್ವ ವಿದ್ಯಾಲಯದ ಸಭಾಂಗಣ , ೪ ನೇ ಮುಖ್ಯ ರಸ್ತೆ, ೧೩ ನೇ ಅಡ್ಡ ರಸ್ತೆ , ಮಲ್ಲೇಶ್ವರ , ಬೆಂಗಳೂರು. ಬೆಳಿಗ್ಗೆ ೧೦ ಗಂಟೆಗೆ. 

ನಾನು ಈ ವರ್ಷದ ನಿರ್ದೇಶಕ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದೇನೆ. ತಾವು ನನ್ನ ಪರವಾಗಿ ಮತ ನೀಡಿ ಆರಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇನೆ. ಚುನಾವಣೆ ಅವಶ್ಯಕವಾಗಿ , ನಡೆದರೆ ಆಗ ಮತ ಚಲಾಯಿಸಲು ತಾವು ಕಡ್ಡಾಯವಾಗಿ ನಿಮ್ಮ ಹೆಸರಿನಲ್ಲಿ ಬಂದ ಕಳೆದ ಆರು ತಿಂಗಳುಗಳೊಳಗಿನ ಹವ್ಯಕ ಮಾಸ ಪತ್ರಿಕೆಯೊಂದನ್ನು ಮತ್ತು ಗುರುತಿಗಾಗಿ ಸರಕಾರದಿಂದ ಮಾನ್ಯತೆ ಪಡೆದ ಯಾವುದಾದರೊಂದು ದಾಖಲೆ , ( ಸರಕಾರದ ಮತದಾರರ ಗುರುತಿನ ಚೀಟಿ, ಅಧಾರ ಕಾರ್ಡ್ , ರೇಶನ್ ಕಾರ್ಡ್ , ಪಾನ್ ಕಾರ್ಡ್ , ಡ್ರೈವಿಂಗ್ ಲೈಸೆನ್ಸ್ , ಇತ್ಯಾದಿ ಯಾವುದಾದರೊಂದನ್ನು ) ತರಬೇಕು . ( ಝೆರೊಕ್ಷ ಕಾಪಿಯೊಂದನ್ನೂ ತನ್ನಿ ). 

ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) , ಬೆಂಗಳೂರು ಇದರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತ ಸಾಗಿದೆ. ೨೦೧೦ - ೧೧ ನೆ ಸಾಲಿನ ವಾರ್ಷಿಕ ಸಭೆಯಲ್ಲಿ ಹಾಜರಿದ್ದ ಸದಸ್ಯರು ೧೩೬ ಮತ್ತು ೨೦೧೧ - ೧೨ ನೇ ಸಾಲಿನ ವಾರ್ಷಿಕ ಸಭೆಯಲ್ಲಿ ಹಾಜರಿದ್ದವರು ೯೨ ಸದಸ್ಯರು ಎಂಬುದನ್ನು ಹವ್ಯಕ ಮಾಸ ಪತಿಕೆಯಲ್ಲಿ ಪ್ರಕಟಗೊಂಡ ಅಂಕಿ ಅಂಶಗಳು ದೃಡಪಡಿಸುತ್ತವೆ. ನಾಲ್ಕಾರು ಕಡೆ ದೊರಕಿದ ಅಂದಾಜಿನಂತೆ ನಮ್ಮ ಹವ್ಯಕ ಸಮಾಜದ ಜನಸಂಖ್ಯೆ ನಾಲ್ಕರಿಂದ ಆರು ಲಕ್ಷಗಳು. ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) , ಬೆಂಗಳೂರು ಇದರ ಸದಸ್ಯತ್ವ ಪಡೆದವರು ೧೬,೧೭೮ ಮಾತ್ರ. ಈ ಸಂಖ್ಯೆಯನ್ನು ಹವ್ಯಕ ಪತ್ರಿಕೆಯಲ್ಲಿ ಮುದ್ರಿಸಿದ ವರದಿ ಹೇಳುತ್ತದೆ. ಈ ರೀತಿಯ ಬೆಳವಣಿಗೆಗಳು ಹೀಗೇ ಮುಂದುವರಿದರೆ ಮುಂದಿನ ಎಂಟು ಹತ್ತು ವರ್ಷಗಳಲ್ಲಿ ವಾರ್ಷಿಕ ಸಭೆಗೆ ಹಾಜರಿರುವವರು ಕೇವಲ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಇವರಿಂದ ಉಪಕೃತರಾದವರು ಮಾತ್ರ ಆದೀತು ಎನ್ನುವದು ಅತಿಶಯೋಕ್ತಿಯಾಗಲಿಕ್ಕಿಲ್ಲ. ಆದಕಾರಣ ತಮ್ಮೆಲ್ಲರನ್ನೂ ಒತ್ತಾಯಪೂರ್ವಕವಾಗಿ ಆಗ್ರಹಿಸುವದೇನೆಂದರೆ ತಾವೆಲ್ಲ ವಾರ್ಷಿಕ ಸಭೆಗೆ ಬಿಡುವು ಮಾಡಿಕೊಂಡು ಬನ್ನಿ ಅಲ್ಲದೆ ಎಲ್ಲಾ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿ . 

ಮಿತ್ರರೇ ಈ ವಿಷಯಗಳನ್ನು ಗಮನಿಸಿ . ಸರ್ವಸದಸ್ಯರ ವಾರ್ಷಿಕ ಸಭೆಗೆ ಶ್ರೀ ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷರೇ ಅಧ್ಯಕ್ಷತೆ ವಹಿಸುತ್ತಾರೆ ಮತ್ತು ಅವರು ತಮ್ಮ ವಿವೇಚನೆಗೊಳಪಟ್ಟು ಯಾವ ಯಾವ ವಿಷಯಗಳು ಚರ್ಚಿಸಲು ಯೋಗ್ಯ ಎಂಬುದನ್ನು ಅವರೇ ನಿರ್ಧರಿಸುತ್ತಾರೆ. ಅಂದರೆ ಯಾರು , ಯಾವ ಪದಾಧಿಕಾರಿಗಳು ಒಂದು ವರುಷ ಯಾವ ಯಾವ ಕೆಲಸಗಳನ್ನು ಮಾಡಿದ್ದಾರೋ ಆ ಕೆಲಸಗಳ ವಿಮರ್ಶೆ ಯಾವ ರೀತಿ ಆಗಬೇಕು, ಯಾವುದು ವಿಮರ್ಶೆಗೊಳಗಾಗಬಾರದು ಎಂಬುದನ್ನು ಅವರೇ ( ಅದ್ಯಕ್ಷರು ಮತ್ತು ಪದಾಧಿಕಾರಿಗಳು ) ನಿರ್ಧರಿಸುವವರು. ಇಲ್ಲಿ ಸಾಮಾನ್ಯ ಸದಸ್ಯನು ಯಾವುದೇ ರೀತಿ ಭಾಗಿಯಾಗುವಂತಿಲ್ಲ. ದಿನ ನಿತ್ಯ ಚಟುವಟಿಕೆ ಕೈಗೊಂಡವರು ಹೇಗೆ ಚಟುವಟಿಕೆಗಳನ್ನು ಮಾಡಿದ್ದಾರೆ, ಅದರ ಫಲಾಫಲಗಳೇನು ಎಂದು ನಿರ್ಧರಿಸಲು ಸಾಮಾನ್ಯ ಸದಸ್ಯನಿಗೆ ಮಾಹಿತಿ ಸಿಗುವ ಯಾವುದೇ ವ್ಯವಸ್ಥೆಯಿಲ್ಲ ಅಲ್ಲದೆ ವಾರ್ಷಿಕ ಸಭೆಯಲ್ಲಿ ಮಂಡಿಸುವ ವರದಿಗಳ ಸಾರಾಂಶಕ್ಕಷ್ಟೇ ಸಾಮಾನ್ಯ ಸದಸ್ಯನು ಸುಮ್ಮನಾಗಬೇಕೆಂಬ ಅಪೇಕ್ಷೆ ಇಲ್ಲಿ ಇರುವಂತೆ ತೋರಿಬರುತ್ತದೆ. ಸೆಪ್ಟೆಂಬರ್ ೨೦೧೩ ರ ಹವ್ಯಕ ಪತ್ರಿಕೆಯ ಪುಟ ೫ ರ ಸಂಖ್ಯೆ ೧೧ ನ್ನು ಓದಿ, ಸಾಮಾನ್ಯ ಸದಸ್ಯನು ವಿಷಯವನ್ನು ಅರಿಯಲು ಮಾಹಿತಿ ಕೇಳಿದರೆ, ಆ ಮಾಹಿತಿ ಕೋರಿಕೆ ಪದಾಧಿಕಾರಿಗಳ ಆವಕ್ರಪೆಗೆ ಒಳಗಾಗದರೆ , ಪದಾಧಿಕಾರಿಗಳು ಪ್ರಕಟಿಸಿದ ಮಾಹಿತಿಗಿಂತ ಬೇರಾವುದೇ ಮಾಹಿತಿ ಹೊರಗೆ ಬರದಂತೆ ರಕ್ಷಣಾತ್ಮಕವಾಗಿ ಈ - " ಬಂದ ವಿಷಯಗಳನ್ನು ಪರಿಶೀಲಿಸಿ, ಸೂಕ್ತ ಕಂಡ ವಿಷಯಗಳನ್ನು ಚರ್ಚಿಸಲು ಅವಕಾಶ ನೀಡಲಾಗುವದು " ಎಂಬ ಪದ ಪುಂಜ ಸೇರಿಸಲಾಗಿದೆ. ಇದು ಆಯ್ಕೆ ಮಾಡಿದವರೇ ಆಯ್ಕೆಗೊಂಡವರಿಂದ ಅಪ್ಪಣೆ ಬೇಡುವ ವಿಚಿತ್ರವಾದರೂ ಸತ್ಯ ಸಂಗತಿ. ಯಾರನ್ನು ಪ್ರತಿನಿಧಿಯಾಗಿ ಸಾಮಾನ್ಯ ಸದಸ್ಯರು ನೇಮಿಸಿದ್ದಾರೋ ಅವರಿಂದಲೇ ಅಪ್ಪಣೆ ಬೇಡಬೇಕೆಂಬ ಈ ಪದ್ದತಿಗೆ ಕೊನೆ ಹಾಡಲೇಬೆಕು. ಆದ್ದರಿಂದ ಸರ್ವ ಸದಸ್ಯರ ಸಭೆಯಲ್ಲಿ ಎಲ್ಲ ಸಾಮಾನ್ಯ ಸದಸ್ಯರೂ ಒಟ್ಟಾಗಿ ಕೆಳಗಿನ ನಿರ್ಣಯಕ್ಕೆ ಒತ್ತಾಯಿಸಬೇಕು:

೧. ಸರ್ವ ಸದಸ್ಯರ ವಾರ್ಷಿಕ ಸಭೆಯ ಅಧ್ಯಕ್ಷತೆಯನ್ನು ಸಭೆಯಲ್ಲಿ ಇರುವ ಹಿರಿಯ , ಅನುಭವಿ ಸದಸ್ಯರೊಬ್ಬರು ವಹಿಸಬೇಕು. ಮತ್ತು ಇವರನ್ನು, ಸೇರಿದ ಸಭಾ ಸದಸ್ಯರೆಲ್ಲ ಸೇರಿ ಆಯ್ಕೆ ಮಾಡಬೇಕು. 

೨. ಪ್ರತಿಯೊಂದು ಮಾಹಿತಿಯೂ ಸಾಮಾನ್ಯ ಸದಸ್ಯನು ಕೇಳಿದಾಗ , ಸೀಮಿತ ಅವಧಿಯಲ್ಲಿ ಆ ಮಾಹಿತಿಯನ್ನು ಸಂಪೂರ್ಣವಾಗಿ , ಸವಿವರವಾಗಿ ನೀಡುವ ಶಾಶ್ವತ ವ್ಯವಸ್ಥೆ ಜಾರಿಗೆ ಬರಬೇಕು. 

********************

ನಾನು ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) , ಬೆಂಗಳೂರು ಇದರ ಅಧ್ಯಕ್ಷರಿಗೆ ಬರೆದ ಪತ್ರಗಳೆರಡನ್ನು ತಮ್ಮೆಲ್ಲರ ಅವಗಾಹನೆಗೆ ತರುತ್ತಿದ್ದೇನೆ. 

ಅಧ್ಯಕ್ಷರು ಮತ್ತು ಪದಾಧಿಕಾರಿಗಳು,

ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ), ಬೆಂಗಳೂರು ......... ಇವರಿಗೆ 

೨೦೧೨ - ೧೩ ನೇ ಸಾಲಿನ ೭೧ ನೇ ವಾರ್ಷಿಕ ಸಭೆಯ ಕಾರ್ಯಕ್ರಮ ಪಟ್ಟಿಯಲ್ಲಿ ನಮೂದಿಸಿದಂತೆ 

೫. ೨೦೧೧-೧೨ ನೇ ಸಾಲಿನ ಸದಸ್ಯರ ವಾರ್ಸಿಕ ಸಭೆಯ ನಡವಳಿಕೆಗಳನ್ನು ದೃಢೀಕರಿಸುವದು ( ನಡವಳಿಕೆಗಳನ್ನು ಫೆಬ್ರವರಿ ೨೦೧೩ ರ ಹವ್ಯಕ ಪತ್ರಿಕೆಯ ಪುಟ ೮ ರಲ್ಲಿ ಪ್ರಕಟಿಸಿದೆ. ಗಮನಿಸುವದು ). ............ ಎಂದಿದೆ. 

ಫೆಬ್ರವರಿ ೨೦೧೩ ರ ಹವ್ಯಕ ಪತ್ರಿಕೆಯ ಪುಟ ೮ ಓದಿದಾಗ ಸಂಖ್ಯೆ ೫ ರಲ್ಲಿ ನೀಡಿದ ಮಾಹಿತಿ ಅಪರಿಪೂರ್ಣವಾಗಿದೆಎಂಬುದು ಗಮನಿಸಬೇಕಾಗಿದೆ. ಸಭೆಯ ಆರಂಭದಲ್ಲಿ ನಾನು " ಮಹಾಸಭೆಯ ಅಧ್ಯಕ್ಷರು , ಪದಾಧಿಕಾರಿಗಳು ಒಂದು ವರುಷ ಕೈಗೊಂಡ ಚಟುವಟಿಕೆಗಳ ವಿಮರ್ಶಾತ್ಮಕ ಚಿಂತನೆಯೊಂದಿಗೆ ಈ ಸಭೆಯ ನಡಾವಳಿಗಳು ಇರಬೇಕಾದುದರಿಂದ ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷರು, ಪದಾಧಿಕಾರಿಗಳು ಹೊರತುಪಡಿಸಿ , ಸಭೆಯಲ್ಲಿದ್ದ ಒಬ್ಬ ಅನುಭವಿ, ಹಿರಿಯರನ್ನು ಸಭಾದ್ಯಕ್ಷರಾಗಿ ಆಯ್ಕೆ ಮಾಡಿ ಅವರ ಅಧ್ಯಕ್ಷತೆಯಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷರು , ಪದಾಧಿಕಾರಿಗಳು ಕೈಗೊಂಡ ಕಾರ್ಯಗಳ ವಿಮರ್ಷೆಯಾಗುವದು ಸೂಕ್ತ ಎಂದು ಪ್ರಸ್ತಾಪಿಸಿದ್ದೆ" . ಅಲ್ಲದೆ ತದನಂತರ ಸಭೆಯಲ್ಲಿ ಸುಮಾರು ಎಂಟರಿಂದ ಹತ್ತು ಗೌರವಾನ್ವಿತ ಸದಸ್ಯರು ವಿವಿಧ ವಿಷಯಗಳ ಕುರಿತು ಮಾತನಾಡಿದ್ದರು. ಈ ಚರ್ಚೆಗಳು ಸರಿಸುಮಾರು ಎರಡು ಮೂರು ತಾಸು ನಡೆದಿದ್ದವು. ಆದರೆ ಈ ಎಲ್ಲಾ ಚರ್ಚೆ, ಮಂಡನೆ, ಖಂಡನೆಗಳನ್ನು ಕೇವಲ ಒಂದು ಶಬ್ದ " ಇತ್ಯಾದಿಗಳ ಬಗ್ಗೆ " ಎಂದು ನಮೂದಿಸಿದ್ದೀರಿ. ಇದು ಅಸಮಂಜಸ. ವರ್ಷಕ್ಕೊಮ್ಮೆ ನಡೆಯುವ ವಾರ್ಷಿಕ ಸಭೆಯ ನಡವಳಿಕೆಗಳನ್ನೇ ಸಮಂಜಸವಾಗಿ ಸರ್ವಸದಸ್ಯರಿಗೆ ತಲುಪಿಸಲು ಸೋತರೆ ಹೇಗೆ? 

ಆದ್ದರಿಂದ ಈ ಮೇಲೆ ಅರುಹಿದ ವಿಷಯವನ್ನು ಬರುವ ಸಭೆಯಲ್ಲಿ ೨೦೧೧ - ೧೨ ನೇ ಸಾಲಿನ ಸದಸ್ಯರ ವಾರ್ಷಿಕ ಸಭೆಯ ನಡವಳಿಕೆಗಳನ್ನು ದೃಡೀಕರಿಸುವ ಮೊದಲು ಸರಿಪಡಿಸಬೇಕಾಗಿ ಕೋರಿಕೆ. 

ವಿಶ್ವಾಸಿ,

ಹರಿಹರ ಭಟ್, ಬೆಂಗಳೂರು. 

ಸದಸ್ಯತ್ವ ಸಂಖ್ಯೆ : ೬೮೭೯ / PO / ೧೦೦೦

**********************

To ,

ಅಧ್ಯಕ್ಷರು,
ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) , ಬೆಂಗಳೂರು

ಸಹೃದಯರಿಗೆ ವಂದನೆಗಳು. 

ಹವ್ಯಕ ಪತ್ರಿಕೆ ಸೆಪ್ಟೆಂಬರ್ ೨೦೧೩ ಪುಟ ೫ ರಲ್ಲಿ ನೀಡಿದ ಕಾರ್ಯಕ್ರಮದ ವಿವರಗಳು ಸಂಖ್ಯೆ ೧೧ ಪ್ರಕಾರ ಪೂರ್ವಭಾವಿಯಾಗಿ ನೀಡಬೇಕಾದ ವಿಷಯಗಳ ಬಗೆಗೆ ಈ ಮೂಲಕ ಬರೆಯುತ್ತಿದ್ದೇನೆ. ವಿಷಯವನ್ನು ಕೂಲಂಕುಶವಾಗಿ ೨೦೧೨ - ೧೩ ರ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಚರ್ಚಿಸಿ , ನಿರ್ಣಯಗಳನ್ನು ಕೈಗೊಳ್ಳಬೇಕಾಗಿ ಆಗ್ರಹಿಸುತ್ತಿದ್ದೇನೆ. 

*************

ಸೆಪ್ಟೆಂಬರ್ ೨೦೧೩ ರ ಪತ್ರಿಕೆ ಪುಟ ೧೧ ರಲ್ಲಿ ಸಂಖ್ಯೆ ೧೫ - ಹವ್ಯಕ ಜ್ವಲಂತ ಸಮಸ್ಯೆಗಳ ಪರಿಹಾರ : 

ಯಾವುದೇ ಒಂದು ಕಾರ್ಯಕ್ರಮಕ್ಕೆ ತೊಡಗಿಸಿದ ಶ್ರಮ, ಹಣ, ಇವನ್ನೆಲ್ಲ ಗಮನಿಸಿ ಕೈಗೊಂಡ ಕಾರ್ಯಕ್ರಮ ಎಷ್ಟು ಫಲಕಾರಿಯಾಯಿತು ಎಂಬುದನ್ನು ಪರಾಮರ್ಶಿಸಬೇಕು. . ಹವ್ಯಕ ಜ್ವಲಂತ ಸಮಸ್ಯೆ ಕುರಿತು ಕೈಗೊಂಡ ಯಾವುದೇ ಕಾರ್ಯಕ್ರಮ ಇನ್ನೂ ಫಲ ನೀಡಿಲ್ಲ ಅಲ್ಲದೆ ಯಾವುದೇ ರೀತಿಯ ಆಶಾದಾಯಕ ಪರಿಣಾಮ ದೊರಕುವ ಲಕ್ಷಣಗಳು ಗೋಚರಿಸುತ್ತಿಲ್ಲಾ ಎಂಬುದು ದಿನಪತ್ರಿಕಾ ವರದಿಗಳು, ವಾಹಿನಿ ಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಇತ್ಯಾದಿ ಗಮನಿಸಿದಾಗ ಕಂಡುಬರುವ ಅಂಶ. ಹವ್ಯಕ ಮಹಾಸಭೆಯ ಸಂಯೋಜನೆಯೊಂದಿಗೆ ಏರ್ಪಡಿಸಿದ ಎರಡು ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದೆ. ಒಂದು ಕಾರ್ಯಕ್ರಮದಲ್ಲಿ ಅರವತ್ತು , ಎಂಭತ್ತು ಜನ ಭಾಗವಹಿಸಿದ್ದರು. ಇನ್ನೊಂದು ಕಾರ್ಯಕ್ರಮದಲ್ಲಿ ಐದು, ಆರು ಜನರಿದ್ದರು ನಂತರ ಆಚೆ ಈಚೆ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿದ್ದವರನ್ನು ಒಟ್ಟುಸೇರಿಸಿ ಹದಿನೈದು, ಹದಿನೆಂಟು ಜನ ಸೇರಿದರು. ಈ ರೀತಿ ಕಾರ್ಯಕ್ರಮಗಳನ್ನು ಸಂಯೋಜಿಸುವದರಿಂದ ಆಗಬಹುದಾದ ಅನುಕೂಲಗಳೇನು? ಈ ರೀತಿ ಕಾರ್ಯಕ್ರಮಗಳಿಂದ ಮುಖಪತ್ರಿಕೆಯ ಪುಟ ತುಂಬಬಹುದೇ ವಿನಃ ಇನ್ಯಾವುದೇ ಪ್ರಯೋಜನ ಕಂಡುಬರುವದಿಲ್ಲ. ಒಂದೆರಡು ಈ ರೀತಿ ಕಾರ್ಯಗಳನ್ನು ಮಾಡಿ ಸಫಲತೆ ಕಾಣದವರ ನೇತ್ರತ್ವದಲ್ಲೇ ಪುನಃ ಪುನಃ ಹತ್ತಾರು ಕಡೆ ಕಾರ್ಯಕ್ರಮಗಳನ್ನು ಆಯೋಜಿಸುವದರಿಂದ ಮಹಾಸಭೆಯ ದಾನಿಗಳ ಹಣ ವ್ಯರ್ಥವಾಗುವದು ತಾನೇ ?

ಯಾವುದೇ ಕಾರ್ಯಕ್ರಮವನ್ನು ಆಯೋಜಿಸಿದಾಗ ಅದರಿಂದ ಅನುಕೂಲಗಳೇನಾದವು?, ಆ ರೀತಿ ಕಾರ್ಯಕ್ರಮಗಳನ್ನು ಮತ್ತೆ ಆಯೋಜಿಸಬೇಕೇ ? ಇತ್ಯಾದಿ ಅಂಶಗಳ ಕುರಿತು ವರದಿ ತಯಾರಿಸಿ, ಪದಾಧಿಕಾರಿಗಳು ಚರ್ಚಿಸಿ , ಅದರ ಸಂಪೂರ್ಣ ಮಾಹಿತಿಯನ್ನು ಸಾಮಾನ್ಯ ಸದಸ್ಯರಿಗೆ ದೊರಕುವಂತೆ ಮಾಡಬೇಕಾದುದು ಆಡಳಿತ ಮಂಡಳಿಯ ಜವಾಬ್ದಾರಿ. ಕಾರ್ಯಕ್ರಮಕ್ಕೆ ವ್ಯಯಿಸಿದ ಹಣವೆಷ್ಟು ಮುಂತಾದ ಮಾಹಿತಿ ಸಂಪೂರ್ಣವಾಗಿ ಸಾಮಾನ್ಯ ಸದಸ್ಯನೊಬ್ಬ ಬಯಸಿದರೆ ಅದನ್ನು ನೀಡುವ ವ್ಯವಸ್ಥೆ ಜಾರಿಗೆ ಬರಬೇಕು. ಈ ರೀತಿ ಚಟುವಟಿಕೆಗಳ ಸಮಗ್ರ ಮಾಹಿತಿ ದಾಖಲಾದಲ್ಲಿ ಮುಂಬರುವ ವರ್ಷಗಳಲ್ಲಿ ವಿವಿಧ ಚಟುವಟಿಕೆ ಕೈಗೊಳ್ಳುವ ಕಾರ್ಯಕಾರಿ ಮಂಡಳಿಯ ವ್ಯಕ್ತಿಗಳಿಗೆ ಅನುಕೂಲಕರ ಮಾಹಿತಿ ದೊರೆಯುವದು. 

ಆದ್ದರಿಂದ ಆಗ್ರಹಿಸುವದೇನೆಂದರೆ ಪ್ರತಿಯೊಂದು ಚಟುವಟಿಕೆ / ಕಾರ್ಯಕ್ರಮ ಹಮ್ಮಿಕೊಳ್ಳುವಾಗಲೂ ಸೂಕ್ತವಾದ ಸಮ್ಮಂದಪಟ್ಟ ವ್ಯಕ್ತಿಯಿಂದ ಮೊದಲ ಯೋಚನಾ ಮಾಹಿತಿ ( ಬಜೆಟ್ ) ಪಡೆದೇ ಹಣ ಬಿಡುಗಡೆ ಮಾಡಬೇಕು. ಅಲ್ಲದೆ ಕಾರ್ಯಕ್ರಮ ಮುಗಿದ ನಂತರ ಕಾರ್ಯಕ್ರಮದ ವರದಿ, ಸಫಲತೆ , ವೆಚ್ಚವಾದ ಹಣ ಎಲ್ಲ ಅಂಕಿ ಅಂಶಗಳೊಂದಿಗೆ ಆ ವ್ಯಕ್ತಿ ನೀಡಬೇಕು ಮತ್ತು ಈ ಎಲ್ಲ ಮಾಹಿತಿ ಮುಂದಿನ ಮೂರು ವರ್ಷಗಳ ವರೆಗೆ ಯಾವುದೇ ಸದಸ್ಯ ನೋಡಬಯಸಿದರೂ ಸಿಗುವ ವ್ಯವಸ್ಥೆ ಮಾಡಲ್ಪಡಬೇಕು. 

******************

ಸೆಪ್ಟೆಂಬರ್ ೨೦೧೩ ರ ಪತ್ರಿಕೆ ಪುಟ ೧೦ ರಲ್ಲಿ ಸಂಖ್ಯೆ ೭ : ಹವ್ಯಕ ವೈವಾಹಿಕ ಮಾಹಿತಿ ಕೇಂದ್ರ ನೋಂದಣಿಯಾದ ವರ ಮತ್ತು ವಧು ಸಂಖ್ಯೆ ನಿಡಿದ್ದೀರಿ. ಅಭಿನಂದನೆಗಳು. ಆದರೆ ಈ ವ್ಯವಸ್ಥೆಯ ಅನುಕೂಲತೆಯಿಂದ ಎಷ್ಟು ಮದುವೆಗಳಾದವು ಎಂಬ ಮಾಹಿತಿ ನೀಡಿಲ್ಲ. ಇದು ಕಣ್ತಪ್ಪಿನಿಂದ ಆದದ್ದೋ ಅಥವಾ ಒಂದೂ ಮದುವೆ ಈ ವ್ಯವಸ್ಥೆಯ ಪ್ರಯೋಜನದಿಂದ ಆಗಿಲ್ಲ ಎಂಬುದೋ ? ಕಳೆದ ಐದು ವರ್ಷಗಳಲ್ಲಿ ಈ ವ್ಯವಸ್ಥೆಯಿಂದ ಆದ ಮದುವೆಗಳ ಸಂಖ್ಯೆ ಎಷ್ಟು ಎಂಬುದನ್ನು ನೀಡಬೇಕು ಮತ್ತು ಈ ವ್ಯವಸ್ಥೆ ಹವ್ಯಕ ಸಮಾಜದಲ್ಲಿ ಹಲವು ಕಡೆ ಹಲವು ಜನರಿಂದ ಉದ್ಯೋಗವಾಗಿ ಸ್ಪರ್ಧಾತ್ಮಕ ರೀತಿ ಲಭ್ಯವಿರುವದರಿಂದ, ಮಹಾಸಭೆಯಲ್ಲಿರುವ ಈ ವ್ಯವಸ್ಥೆ ನಿರೀಕ್ಷಿಸಿದ ಪ್ರಯೋಜನ ನೀಡುವಲ್ಲಿ ವಿಫಲವಾಗಿದೆ ಎನ್ನುವದನ್ನು ಒಪ್ಪಿ ಇದನ್ನು ನಿಲ್ಲಿಸಬೇಕು / ಮುಂದುವರಿಸಬಾರದು ಎಂದು ಆಗ್ರಹ. 

******************

ಸೆಪ್ಟೆಂಬರ್ ೨೦೧೩ ರ ಪತ್ರಿಕೆ ಪುಟ ೧೨ ರಲ್ಲಿ ಸಂಖ್ಯೆ ೧೯ : ಅಂತರ್ಜಾಲ ಸಮಿತಿ 

ಅಂತರ್ಜಾಲವಿರುವದು ( website ) ಮತ್ತು ಅದಕ್ಕೊಂದು ಸಮಿತಿ ಇರುವದು ಸದಾಶಯ. ನಾವೀಗ ಇಪ್ಪತ್ತೊಂದನೇ ಶತಮಾನದ ತಾಂತ್ರಿಕ ಯುಗದಲ್ಲಿದ್ದೇವೆ. ಈ ಅಂತರ್ಜಾಲ ( website ) ವನ್ನು ವೀಕ್ಷಿಸಿದಾಗ , ಅಂತರ್ಜಾಲ ಸೌಲಭ್ಯ ಈ ಜಗತ್ತಿಗೆ ಎಂದು ಕಾಲಿಟ್ಟಿತೋ ಆ ಕಾಲದ ಅಂತರ್ಜಾಲವೊಂದನ್ನು ಭೇಟಿ ನೀಡಿದ ಅನುಭವವಾಗುವದು. ಹತ್ತಾರು ಸುವಯವಸ್ಥಿತ ಅಂತರ್ಜಾಲಗಳನ್ನು ಅಭ್ಯಸಿಸಿ , ಪ್ರತಿ ಸದಸ್ಯನೂ ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಅಂತರ್ಜಾಲವನ್ನು ಹೊಂದುವ ಅತಿ ಅವಶ್ಯಕತೆ ಇಂದಿನ ಕಾಲದ್ದಾಗಿದೆ. ಇಂದು ಹಿಂದಿನ ತಲೆಮಾರಿನ ನೇತಾರರ ಅಭಿವೃದ್ಧಿ ಯೋಚನೆಗಳನ್ನು ಪ್ರಸ್ತುತವಾಗಿಸಿ ನಮ್ಮ ಮಹಾಸಭೆ ವರ್ತಮಾನದಲ್ಲಿ ಒಂದೆರಡು ದಶಮಾನಗಳಷ್ಟು ಹಿಂದಿದೆ. ಸಮಾಜದ ಬಹುತೇಕ ಸಂಖ್ಯೆ ಯುವಜನಾಂಗ . ಆಧುನಿಕತೆಯನ್ನು ಮೈಗೂಡಿಸಿಕೊಂಡ ಅಂತರ್ಜಾಲ ವ್ಯವಸ್ಥೆ ಈ ಕೂಡಲೆ ಕೈಗೊಳ್ಳಬೇಕಾದ ಪ್ರಥಮ ಕೆಲಸ. ಸರಿಯಾದ ಅಂತರ್ಜಾಲ ವ್ಯವಸ್ಥೆಯಿಂದ ಸಮಯ ಉಳಿತಾಯ, ಹಣದ ಉಳಿತಾಯ, ಶೀಘ್ರ ಸಂಪರ್ಕ ಇತ್ಯಾದಿ ಹತ್ತು ಹಲವು ಅನುಕೂಲಗಳಿವೆ. ಸಹಜವಾಗಿ ಹಿಂದಿನ ತಲೆಮಾರಿನವರಿಗೆ ಅಂದರೆ ಅರವತ್ತು ಎಂಭತ್ತು ವಯಸ್ಸಾದವರಿಗೆ ಹೊಸ ಆಧುನಿಕ ವ್ಯವಸ್ಥೆಗೆ ಹೊಂದಿಕೊಳ್ಳುವದು ಕಷ್ಟವಾಗುತ್ತದೆ . ಹಾಗೆಂದು ಆಧುನಿಕತೆಗೆ ಮಹಾಸಭೆ ತೆರೆದುಕೊಳ್ಳದಿದ್ದರೆ ನಮ್ಮ ಯುವಜನಾಂಗ ನಿಧಾನವಾಗಿ ಈಗ ಗೋಚರಿಸುತ್ತಿರುವಂತೆ ಮಹಸಭೆಯಿಂದ ದೂರವಾದೀತು. ಆದ್ದರಿಂದ ಈ ಕೂಡಲೇ ಅತೀ ಅಧುನಿಕ ಅಂತರ್ಜಾಲ ವ್ಯವಸ್ಥೆಯನ್ನು ಹೊಂದಬೇಕೆಂದು ಈ ಸಭೆ ನಿರ್ಣಯಿಸಬೇಕಾಗಿದೆ. 

********************

ಸೆಪ್ಟೆಂಬರ್ ೨೦೧೩ ರ ಪತ್ರಿಕೆ ಪುಟ ೧೨ ರಲ್ಲಿ ಸಂಖ್ಯೆ ೨೨ : ವಿಪ್ರ ಶಾಸಕರಿಗೆ ಅಭಿನಂದನೆ 

ವ್ಯವಸ್ಥಿತತವಾಗಿ , ಎಲ್ಲರೂ ಅಭಿಮಾನ ಪಡುವ ರೀತಿಯಲ್ಲಿ ಈ ಕಾರ್ಯಕ್ರಮ ಸಂಯೋಜನೆಗೊಂಡಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾನು ಹತ್ತು ಹಲವಾರು ನೇತಾರರನ್ನು ಮಾತನಾಡಿಸಿದಾಗ, ಈ ಸಂಯೋಜನೆಯ ಎಲ್ಲ ಶ್ರೇಯಸ್ಸು ಶ್ರೀ ಪ್ರಶಾಂತ ಭಟ್ ರವರಿಗೆ ಸಲ್ಲಬೇಕಾದದ್ದು. ಎಲ್ಲರ ಸಹಕಾರ ಕ್ರೋಢೀಕರಿಸಿ ಈ ರೀತಿ ವ್ಯವಸ್ಥೆ ಮಾಡಿದ್ದಾರೆ ಪ್ರಶಾಂತ ಭಟ್ಟರು ಎಂದು ಬಾಯಿ ತುಂಬ ಹೊಗಳಿದ್ದರು ಅದೇ ರೀತಿ ಸಭೆಯಲ್ಲೂ ಹೊಗಳಿಕೆಯ ಮಾತುಗಳನ್ನಾಡಿದ್ದರು ಅಲ್ಲದೆ ಕಾರ್ಯಕ್ರಮದ ವರದಿ ಹವ್ಯಕ ಪತ್ರಿಕೆಯಲ್ಲಿ ಪ್ರಕಟಗೊಂಡಾಗಲೂ ಈ ವಿಷಯ ನಮೂದಿಸಲ್ಪಟ್ಟಿತ್ತು. ಆದರೆ ಈಗ ಈ ವಾರ್ಷಿಕ ವರದಿಯಲ್ಲಿ ಪ್ರಶಾಂತ ಭಟ್ಟರ ಹೆಸರು ಕಾಣದಿದ್ದುದಕ್ಕೆ ವಿಶಾದವೆನಿಸಿದೆ. ಇದೇನು ಉದ್ದೇಶಪೂರ್ವಕವಾಗಿ ಆಗಿದ್ದೋ ಇಲ್ಲವೆ ಕಾಣದ ಕೈ ಈ ಬೆಳವಣಿಗೆಯ ಹಿಂದೆ ಕೆಲಸ ಮಾಡಿದೆಯೋ? ಪ್ರಶಾಂತ ಭಟ್ಟ ರ ಹೆಸರನ್ನು ನಮೂದಿಸಬೇಕೆಂದು ಈ ಮೂಲಕ ಆಗ್ರಹ. 

*************************

ಅಲ್ಲದೆ ಹಿಂದಿನ ಅಧ್ಯಕ್ಷರುಗಳ ಅಂದರೆ ಪಾಸ್ಟ್ ಪ್ರೆಸಿಡೆಂಟ್ಸ್ ಒಂದು ಕಮೀಟಿ ಇರಬೇಕೆಂದು ಸಲಹೆ. ಆ ಕಮಿಟಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರಿ ತಮ್ಮ ಹಿಂದಿನ ಅನುಭವಗಳ ಮತ್ತು ವರ್ತಮಾನದಲ್ಲಿ ನಡೆಯುತ್ತಿರುವ ಮಹಾಸಭೆಯ ಚಟುವಟಿಕೆಗಳನ್ನಾಧರಿಸಿ ತಮ್ಮ ಸಲಹೆಗಳನ್ನು ನೀಡಬೇಕು. ನೀಡಿದ ಸಲಹೆಗಳು ಮತ್ತು ಅನ್ವಯಿಸಿಕೊಂಡ ಸಲಹೆಗಳ ವರದಿ ವಾರ್ಷಿಕ ಸಭೆಯಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾದ ಗೌರವ ಕಾರ್ಯದರ್ಶಿಗಳಿಂದ ಮಂಡಿಸಲ್ಪಡಬೇಕು. ಈ ಕುರಿತು ಈಗ ನಿರ್ಣಯವಾಗಬೇಕು . 

*************************

ಸೆಪ್ಟೆಂಬರ್ ೨೦೧೩ ರ ಪತ್ರಿಕೆ ಪುಟ ೧೬ ರಲ್ಲಿ ಉಳಿತಾಯ/ ಖರ್ಚು ( ೨,೧೨,೨೭೪.೬೦ ) ಎಂದು ತೋರಿಸಿದೆ. ಈ ಮೊತ್ತ ಪ್ರಸಕ್ತ ಸಾಲಿನಲ್ಲಿ ಆದಾಯಕ್ಕಿಂತ ಹೆಚ್ಚು ವೆಚ್ಚ ಎಂಬುದನ್ನು ಸೂಚಿಸುತ್ತದೆ. ಅದೇ ರೀತಿ ಕಳೆದ ಸಾಲಿನಲ್ಲೂ ಆದಾಯಕ್ಕಿಂತ ೩,೮೬೦೪೬.೪೨ ರೂಪಾಯಿ ಹೆಚ್ಚು ವೆಚ್ಚ ಮಾಡಲಾಗಿದೆ. ಅಂದರೆ ವರ್ಷದಿಂದ ವರ್ಷಕ್ಕೂ ಹತ್ತು ಹಲವಾರು ವರ್ಷಗಳಿಂದ ಕೂಡಿಟ್ಟ ಹಣ ಖರ್ಚಾಗುತ್ತಿದೆ ಎಂಬ ಸೂಚನೆ. ಆದಾಯಕ್ಕಿಂತ ವೆಚ್ಚ ಜಾಸ್ತಿ ಮಾಡುವ ಆಡಳಿತ ಮಂಡಲಿಯ ಈ ಧೋರಣೆಯನ್ನು ಒಪ್ಪಲು ಕಷ್ಟ, ಈ ಧೋರಣೆಯೇ ಮುಂದುವರಿದಲ್ಲಿ ಮುಂದಿನ ನಾಲ್ಕಾರು ವರ್ಷಗಳಲ್ಲೇ ಆರ್ಥಿಕ ( ನಗದು ) ಮುಗ್ಗಟ್ಟು ಉಂಟಾದೀತು. ಆದ್ದರಿಂದ ಆಡಳಿತ ಮಂಡಲಿ ಈ ರೀತಿ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವ ಕ್ರಿಯೆಯನ್ನು ಮುಂಬರುವ ದಿನಗಳಲ್ಲಿ ಮುಂದುವರಿಸಬಾರದೆಂದು ನಿರ್ಣಯ ಕೈಗೊಳ್ಳಬೇಕು. 

********************

ಸೆಪ್ಟೆಂಬರ್ ೨೦೧೩ ರ ಪತ್ರಿಕೆ ಪುಟ ೧೬ ರಲ್ಲಿ ನಿರ್ವಹಣೆ ಮತ್ತು ಸರಿಪಡಿಸುವ ವೆಚ್ಚಗಳು ಎಂದು ರೂಪಾಯಿ ೪ ಲಕ್ಷ , ೧೪ ಸಾವಿರ , ೫೩೩ ತೋರಿಸಲಾಗಿದೆ. ಇದು ಏನೆಂಬುದು ಬಹುಷಃ ಯಾರಿಗೂ ಗೊತ್ತಗಲಿಕ್ಕಿಲ್ಲ. ಈ ಕುರಿತು ಸೂಕ್ತ ವಿವರಣೆ ನೀಡಿದ್ದರೆ ಚೆನ್ನಾಗಿತ್ತು. ಈ ರೀತಿ ಕನ್ನಡವನ್ನು ಕಬ್ಬಿಣದ ಕಡಲೆಯಾಗಿಸುವ ಬದಲು ಸುಲಭ ಶಬ್ದಗಳಲ್ಲಿ ಎಲ್ಲ ವಿವರಗಳನ್ನು ನೀಡಿದರೆ ಸಾಮಾನ್ಯ ಸದಸ್ಯನೂ ಪದಾಧಿಕಾರಿಗಳ ಕೆಲಸದ ಬಗ್ಗೆ ಗೌರವ ಹೊಂದಲು ಅನುಕೂಲವಾಗುತ್ತದೆ. ಆದ್ದರಿಂದ ಯಾವುದೇ ಖರ್ಚು ಒಮ್ಮೆ ಹತ್ತು ಸಾವಿರಕ್ಕಿಂತ ಜಾಸ್ತಿ ಆದಾಗ , ಆ ಖರ್ಚಿನ ಎಲ್ಲ ವಿವರಗಳು ಸಾಮಾನ್ಯ ಸದಸ್ಯನಿಗೆ ಪರಿಶೀಲಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಬೇಕೆಂದು ಇಲ್ಲಿ ಕೋರಿಕೆ. 

**********************

ಸೆಪ್ಟೆಂಬರ್ ೨೦೧೩ ರ ಪತ್ರಿಕೆ ಪುಟ ೧೭ ರಲ್ಲಿ ಸಾಲ ಹಾಗು ಮುಂಗಡ ಎಂದು ಐವತ್ತು ಸಾವಿರ ರೂಪಾಯಿ ತೋರಿಸಲಾಗಿದೆ. ಈ ಸಾಲ ಹಾಗು ಮುಂಗಡ ಯಾರ್ಯಾರಿಗೆ ನೀಡಲಾಗಿದೆ ಮತ್ತು ಲೆಕ್ಕ ಪತ್ರ ಮುಗಿಯುವವರೆಗೂ ಇದರ ಮರುಪಾವತಿ ಯಾಕಾಗಲಿಲ್ಲ ಎಂಬ ವಿವರವನ್ನು ಈ ಸಭೆಗೆ ನೀಡಬೇಕಾಗಿ ವಿನಂತಿ. 

********************

ಸೆಪ್ಟೆಂಬರ್ ೨೦೧೩ ರ ಪತ್ರಿಕೆ ಪುಟ ೧೬ ರಲ್ಲಿ ಆಡಳಿತ ಮತ್ತು ಇತರೇ ವೆಚ್ಚ ರೂಪಾಯಿ ಹದಿನಾಲ್ಕು ಲಕ್ಷ ಮೂವತ್ತೊಂಭತ್ತು ಸಾವಿರ ೬೫೪. ೧೦ ಎಂದಿದೆ. ದೊಡ್ಡ ಮೊತ್ತದ ಖರ್ಚುಗಳಿಗೆ ರೂಪಾಯಿ ಹತ್ತು ಸಾವಿರ ಮೇಲೆ ಯಾವುದೇ ಒಮ್ಮೆ ಖರ್ಚು ಮಾಡಿದ ವಿವರಗಳನ್ನು ನೀಡುವದು ಸೂಕ್ತ. ಅಲ್ಲದೇ ಈ ಇತರೆ ಎಂಬುದನ್ನು ಆದಷ್ಟು ಕಡಿಮೆ ಬಳಸಿ ಅಥವಾ ಬಳಸದೆಯೇ ಅವುಗಳ ವಿವರ ನೀಡಿದರೆ ಒಂದು ಒಳ್ಳೆ ಪದ್ಧತಿಯನ್ನು ಆರಂಭಿಸಿದಂತಾಗುತ್ತದೆ. ಈ ಕುರಿತು ಈ ಸಭೆ ಸೂಕ್ತ ಗಮನನೀಡುವಂತಾಗಲಿ ಎಂಬ ಆಶಯ. 

*************************



೨೦೧೨ - ೧೩ ನೇ ಸಾಲಿನ ೭೧ ನೇ ವಾರ್ಷಿಕ ಸಭೆಯ ಕಾರ್ಯಕ್ರಮ ಪಟ್ಟಿಯಲ್ಲಿ ನಮೂದಿಸಿದಂತೆ 

( ಸೆಪ್ಟೆಂಬರ್ ೨೦೧೩ ಹವ್ಯಕ ಪತ್ರಿಕೆ ಪುಟ ೫ ) 

೫. ೨೦೧೧-೧೨ ನೇ ಸಾಲಿನ ಸದಸ್ಯರ ವಾರ್ಸಿಕ ಸಭೆಯ ನಡವಳಿಕೆಗಳನ್ನು ದೃಢೀಕರಿಸುವದು ( ನಡವಳಿಕೆಗಳನ್ನು ಫೆಬ್ರವರಿ ೨೦೧೩ ರ ಹವ್ಯಕ ಪತ್ರಿಕೆಯ ಪುಟ ೮ ರಲ್ಲಿ ಪ್ರಕಟಿಸಿದೆ . ಗಮನಿಸುವದು ). ............ ಎಂದಿದೆ. 

ಫೆಬ್ರವರಿ ೨೦೧೩ ರ ಹವ್ಯಕ ಪತ್ರಿಕೆಯ ಪುಟ ೮ ಓದಿದಾಗ ಸಂಖ್ಯೆ ೫ ರಲ್ಲಿ ನೀಡಿದ ಮಾಹಿತಿ ಅಪರಿಪೂರ್ಣವಾಗಿದೆಎಂಬುದು ಗಮನಿಸಬೇಕಾಗಿದೆ. ಸಭೆಯ ಆರಂಭದಲ್ಲಿ ನಾನು " ಮಹಾಸಭೆಯ ಅಧ್ಯಕ್ಷರು , ಪದಾಧಿಕಾರಿಗಳು ಒಂದು ವರುಷ ಕೈಗೊಂಡ ಚಟುವಟಿಕೆಗಳ ವಿಮರ್ಶಾತ್ಮಕ ಚಿಂತನೆಯೊಂದಿಗೆ ಈ ಸಭೆಯ ನಡಾವಳಿಗಳು ಇರಬೇಕಾದುದರಿಂದ ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷರು, ಪದಾಧಿಕಾರಿಗಳು ಹೊರತುಪಡಿಸಿ , ಸಭೆಯಲ್ಲಿದ್ದ ಒಬ್ಬ ಅನುಭವಿ, ಹಿರಿಯ ಸದಸ್ಯರನ್ನು ಸಭಾದ್ಯಕ್ಷರಾಗಿ ಆಯ್ಕೆ ಮಾಡಿ ಅವರ ಅಧ್ಯಕ್ಷತೆಯಲ್ಲಿ ಹವ್ಯಕ ಮಹಾಸಭಾ ಅಧ್ಯಕ್ಷರು , ಪದಾಧಿಕಾರಿಗಳು ಕೈಗೊಂಡ ಕಾರ್ಯಗಳ ವಿಮರ್ಷೆಯಾಗುವದು ಸೂಕ್ತ ಎಂದು ಪ್ರಸ್ತಾಪಿಸಿದ್ದೆ" . ಅಲ್ಲದೆ ತದನಂತರ ಸಭೆಯಲ್ಲಿ ಸುಮಾರು ಎಂಟರಿಂದ ಹತ್ತು ಗೌರವಾನ್ವಿತ ಸದಸ್ಯರು ವಿವಿಧ ವಿಷಯಗಳ ಕುರಿತು ಮಾತನಾಡಿದ್ದರು. ಈ ಚರ್ಚೆಗಳು ಸರಿಸುಮಾರು ಎರಡು ಮೂರು ತಾಸು ನಡೆದಿದ್ದವು. ಆದರೆ ಈ ಎಲ್ಲಾ ಚರ್ಚೆ, ಮಂಡನೆ, ಖಂಡನೆಗಳನ್ನು ಕೇವಲ ಒಂದು ಶಬ್ದ " ಇತ್ಯಾದಿಗಳ ಬಗ್ಗೆ " ಎಂದು ನಮೂದಿಸಿದ್ದೀರಿ. ಇದು ಅಸಮಂಜಸ. ವರ್ಷಕ್ಕೊಮ್ಮೆ ನಡೆಯುವ ವಾರ್ಷಿಕ ಸಭೆಯ ನಡವಳಿಕೆಗಳನ್ನೇ ಸಮಂಜಸವಾಗಿ ಸರ್ವಸದಸ್ಯರಿಗೆ ತಲುಪಿಸಲು ಸೋತರೆ ಹೇಗೆ? 
ಆದ್ದರಿಂದ ವಾರ್ಷಿಕ ಸಭೆಯ ನಡವಳಿಕೆಗಳನ್ನು ಸಂಪೂರ್ಣವಾಗಿ ಯಾವುದೇ ಚರ್ಚೆಯನ್ನು ಕಡೆಗಾಣಿಸದೆ ದಾಖಲಿಸುವ ವ್ಯವಸ್ಥೆಯಾಗಬೇಕೆಂದು ಈ ಸಭೆಯಲ್ಲಿ ನಿರ್ಣಯಿಸಬೇಕು. 

***************************

ಪೆಬ್ರವರಿ ೨೦೧೩ ಹವ್ಯಕ ಪತ್ರಿಕೆ ಪುಟ ೮ :

ಸಂಖ್ಯೆ ೯ : ಸಭೆಯಲ್ಲಿ ಚರ್ಚಿಸಲು ಸದಸ್ಯರಿಂದ ಪೂರ್ವಭಾವಿಯಾಗಿ ಬಂದ ವಿಷಯವನ್ನು ಚರ್ಚಿಸುವದು :

ನಿವೇಶನದಾರರ ಸಮಸ್ಯೆ, ಲೆಕ್ಕ ಪತ್ರದ ವಿವರ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ...................... 

ಈ ಕುರಿತು ಆದ ಬೆಳವಣಿಗೆಗಳೇನು ? ನೊಂದ ಸದಸ್ಯರ ಸಮಸ್ಯೆ ಪರಿಹಾರ ಕಂಡಿತೇ ? ಈ ರೀತಿ ಮತ್ತೆ ಸಮಸ್ಯೆಗಳು ತಲೆದೋರದಂತೆ ಯಾವ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದ್ದೀರಿ? ಸಮಸ್ಯೆಗೆ ಕಾರಣ ಪುರುಷರನ್ನು ಮಹಾಸಭೆಯ ಆರ್ಥಿಕ ಚಟುವಟಿಕೆಗಳಿಂದ ದೂರವಿಡಲು ಕೈಕೊಂಡ ಕ್ರಮಗಳೇನು? ಎಂದು ಈ ಸರ್ವ ಸದಸ್ಯರ ವಾರ್ಷಿಕ ಸಭೆಗೆ ತಿಳಿಸಬೇಕು. 

*********************************

ಡಿಸೆಂಬರ ೨೦೧೧ ಹವ್ಯಕ ಪತ್ರಿಕೆ ಪುಟ ೭ : 

ಸಂಖ್ಯೆ ೧೦ ರಲ್ಲಿ ರೈಲು ಮಾರ್ಗ ವಿಸ್ತರಣೆಯ ಬಗ್ಗೆ ಮಹಾಸಭೆ ಪ್ರಯತ್ನ ಮುಂದುವರಿಸಲಿದೆಯೆಂದು ಅದ್ಯಕ್ಷರು ತಿಳಿಸಿದ್ದರು ಎಂದು ಉಲ್ಲೇಖವಿದೆ. ತಾಳಗುಪ್ಪಾದಿಂದ ಶಿರಸಿ, ಸಿದ್ದಾಪುರ, ದಂಡೇಲಿ ಹಾಗೂ ತಾಳಗುಪ್ಪಾದಿಂದ ಹೊನ್ನಾವರ ರೇಲ್ವೆ ಸಂಪರ್ಕಕ್ಕೆ ಪ್ರಯತ್ನಿಸಲಾಗುವದು ಎಂದು ಅದ್ಯಕ್ಷರು ಸರ್ವ ಸದಸ್ಯರ ಸಭೆಯಲ್ಲಿ ನೀಡಿದ ಆಶ್ವಾಸನೆ ಕುರಿತು ಕೈಗೊಂಡ ಕಾರ್ಯಗಳಾವವು ಎಂದು ಈ ಸಭೆಗೆ ತಿಳಿಸಬೇಕಾಗಿ ಆಗ್ರಹ. 

**********************************

ಸೆಪ್ಟೆಂಬರ್ ೨೦೧೨ ಹವ್ಯಕ ಪತ್ರಿಕೆ ಪುಟ ೯

ಸಂಖ್ಯೆ ೨೭ ರಲ್ಲಿ, ನಿಯಮಾವಳಿ ತಿದ್ದುಪಡಿ ಸಮಿತಿ : ಕಾರಣಾಂತರದಿಂದ ಸಭೆಯ ಕಲಾಪವು ಮುಂದುವರಿಯದೆ ................... ಈ ಕಾರಣಗಳನ್ನು ಹೋಗಲಾಡಿಸಿ ನಿಯಮಾವಳಿಗಳನ್ನು ವರ್ತಮಾನಕ್ಕೆ ಪ್ರಸ್ತುತವಾಗುವಂತೆ ಬದಲಾವಣೆಗಳನ್ನು ತರಲು ಯಾವ ರೀತಿ ಪ್ರಯತ್ನಿಸಲಾಗಿದೆ ಎಂದು ಈ ಸಭೆಗೆ ವಿಸ್ತ್ರತವಾಗಿ ತಿಳಿಸಬೇಕೆಂದು ವಿನಂತಿ. 


************************************


ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಒಂದು ವರ್ಷದ ಅವಧಿ ತುಂಬಾ ಕಡಿಮೆಯಿರುವದರಿಂದ ತನ್ನ ಕರ್ತತ್ವ ಶಕ್ತಿಯನ್ನು ಕಾರ್ಯಕ್ರಮಗಳಲ್ಲಿ ಹೊರಹೊಮ್ಮಲು , ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಮಯವನ್ನು ಎರಡು ವರ್ಷ ಅವಧಿಗೆ ಹೆಚ್ಚಿಸಿ , ಆಯ್ಕೆಯನ್ನು ಎರಡು ವರ್ಷಗಳಿಗೊಮ್ಮೆ ವ್ಯವಸ್ಥೆಗೊಳಿಸಬೇಕೆಂದು ಈ ಸಭೆ ನಿರ್ಣಯಿಸಲು ಪ್ರಸ್ಥಾಪಿಸುತ್ತೇನೆ. 

*************************************

ವಿಶ್ವಾಸಿ,

ಹರಿಹರ ಭಟ್, ಬೆಂಗಳೂರು. 

ಸದಸ್ಯತ್ವ ಸಂಖ್ಯೆ : ೬೮೭೯ / PO / ೧೦೦೦

No comments:

Post a Comment