Friday, October 11, 2013

A letter addressed by Mr.Kalagar Giri, Honourable Member of Shree Akhila Havyaka Mahasabha (R) Bangalore.

ಸೂಕ್ತ ವಿಚಾರ. ಪರಿಹಾರ ಕಾಣಬೇಕು. ಸಂಸ್ಥೆ ಬೆಳೆಯಬೇಕು. ಸಂಸ್ಥೆ ಬೆಳವಣಿಗೆಯಿಲ್ಲದೆ ನಿಂತ ನೀರಾಗಬಾರದು.
                                                                                                
                                                            Comment by Mr.Harihar S Bhat, Bangalore.

A letter addressed by Mr.Kalagar Giri, Honourable Member of Shree Akhila Havyaka Mahasabha (R) Bangalore.
ಅನ್ಯಾಯದ ವಿರುದ್ದ ಮತ್ತೊಂದು ಹೋರಾಟ.............

ಗೆ:
೧. ಶ್ರೀ ಜಿ ಕೆ ಭಟ್,
ಮುಖ್ಯ ಚುನಾವಣಾಧಿಕಾರಿಗಳು,
ಅಖಿಲ ಹವ್ಯಕ ಮಹಾಸಭಾ (ರಿ), ಬೆಂಗಳೂರು.

೨. ಶ್ರೀ ,ಡಿ. ವಿ. ಹೆಗಡೆ,
ಗೌರವ ಪ್ರಧಾನ ಕಾರ್ಯದರ್ಶಿಗಳು
ಅಖಿಲ ಹವ್ಯಕ ಮಹಾಸಭಾ (ರಿ), ಬೆಂಗಳೂರು

ಮಾನ್ಯರೇ,

ವಿಷಯ: ಮಹಾಸಭೆಯ ಪ್ರಸಕ್ತ ಸಾಲಿನ ಚುನಾವಣೆಯ ಬಗ್ಗೆ

ನಾನು ಹವ್ಯಕ ಮಹಾಸಭೆಯ ಸದಸ್ಯನಾಗಿದ್ದು ( ಸ.ಸಂ ....) ಮಹಾಸಭೆಯ ಸೆಪ್ಟೆಂಬರ್ ೨೦೧೩ರ ಸಂಚಿಕೆಯಲ್ಲಿ ಪ್ರಕಟವಾದ ಚುನಾವಣಾ ಅಧಿಸೂಚನೆಯನ್ನು ಮತ್ತು ವೇಳಾಪಟ್ಟಿಯನ್ನು ಗಮನಿಸಲಾಗಿ, ಅದರಲ್ಲಿ ಈ ಕೆಳಗಿನ ಲೋಪದೋಷಗಳನ್ನು ತಮ್ಮ ಗಮನಕ್ಕೂ ತರಲು ಈ ಮೂಲಕ ಇಚ್ಚಿಸುತ್ತೇನೆ.
೧. ಸದರಿ ವೇಳಾಪಟ್ಟಿಯ ಪ್ರಕಾರ, ಚುನಾವಣಾ ದಿನಾಂಕದಂದು ಬೆಳಿಗ್ಗೆ ೧೦.೩೦ ರಿಂದ ಮಧ್ಯ್ಹಾನ್ನ ೧.೩೦ ರ ವರೆಗೆ ಮತದಾನದ ಸಮಯವನ್ನು ನಿಗದಿಪಡಿಸಲಾಗಿದೆ. ನಮ್ಮ ಮಹಾಸಭೆಯಲ್ಲಿ ಸುಮಾರು ೧೫೦೦೦ ಕ್ಕೂ ಮಿಕ್ಕಿ ಮತದಾರರಿದ್ದು, ನಿಗದಿಪಡಿಸಿದ ವೇಳೆಯಲ್ಲಿ ಸಮಯಾವಕಾಶದ ಕೊರತೆಯಿಂದ ಮತದಾನಕ್ಕೆ ಅಡ್ಡಿಯುಂಟಾಗುತ್ತದೆ. ಆದ್ದರಿಂದ ತಾವು ಸೂಕ್ತ ಸಂಖ್ಯೆಗಳಲ್ಲಿ ಮತದಾನ ಕೇಂದ್ರಗಳನ್ನು ತೆರೆಯುವುದರ ಮೂಲಕ ಸೂಕ್ತ ಮತದಾನಕ್ಕೆ ಅನುವು ಮಾಡಿಕೊಡಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇನೆ.
೨. ಸದರಿ ಅಧಿಸೂಚನೆಯಲ್ಲಿ, ತಾವು ಚುನಾವಣೆಯ ಸ್ಥಳದ ವಿವರ ಮತ್ತು ಸ್ಥಾಪಿಸಲಾಗುವ ಮತದಾನ ಕೇಂದ್ರಗಳ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿರುವುದು ಕಂಡುಬಂದಿರುವುದಿಲ್ಲ.
೩. ಮತದಾನಕ್ಕೆ ಸಂಬಂಧಿಸಿದಂತೆ, ಸದರಿ ಪತ್ರಿಕೆಯಲ್ಲಿ, ಪ್ರತಿ ಮತದಾರನಿಗೂ ಮತದಾನ ಮಾಡಲು ೬ ತಿಂಗಳೊಳಗಿನ ಹವ್ಯಕ ಪತ್ರಿಕೆ ಮತ್ತು ಗುರುತಿಗಾಗಿ ಸರಕಾರದಿಂದ ಮಾನ್ಯತೆ ಪಡೆದ ಯಾವುದಾದರೊಂದು ದಾಖಲೆಯ ಪ್ರತಿಯನ್ನು ತರಲು ಸೂಚಿಸಿದ್ದು ತಮ್ಮ ಗಮನಕ್ಕೆ ಈ ಮೂಲಕ ತರಬಯಸುತ್ತೇನೆ.
ಹವ್ಯಕ ಪತ್ರಿಕೆಯನ್ನು ಸದಸ್ಯರ ವಿಳಾಸಕ್ಕೆ ತಲುಪಿಸುವುದು ಹವ್ಯಕ ಮಹಾಸಭೆಯ ಜವಾಬ್ದಾರಿಯಾಗಿದ್ದು, ಸಾಮಾನ್ಯ ಅಂಚೆಯ ಮೂಲಕ ಕಳುಹಿಸಲಾಗುತ್ತದೆ. ಪತ್ರಿಕೆ ಯಾವುದೇ ಕಾರಣಕ್ಕೆ ತಲುಪದೇ ಇದ್ದು, ಅದನ್ನು ಮತದಾನದ ಸಮಯದಲ್ಲಿ ಹಾಜರುಪಡಿಸದೆ ಇದ್ದರೆ, ಮತದಾನದ ಹಕ್ಕನ್ನು ತಿರಸ್ಕರಿಸುವುದು ಸದಸ್ಯರ ಹಕ್ಕಿನ ಉಲ್ಲಂಘನೆಯಾಗಿರುತ್ತದೆ.
ಕೆಲವು ಸದಸ್ಯರು ನೋಂದಣೀ ಮಾಡುವಾಗ, ಸಭೆಯ ನಿಯಮಾವಳಿಗಳ ಪ್ರಕಾರ ಪತ್ರಿಕೆಯನ್ನು ಮಿಂಚಂಚೆಯ ಮೂಲಕ ಕಳುಹಿಸಲು ಅಥಾವ ಮನೆಯಲ್ಲಿ ಅನೇಕ ಜನ ಸದಸ್ಯರಿದ್ದು ತಮ್ಮ ಹೆಸರಿಗೆ ಪತ್ರಿಕೆ ಕಳುಹಿಸದಿರಲು ಕೋರಿರುತ್ತಾರೆ. ಅಂತಹ ಸದಸ್ಯರು ಮತದಾನದ ಸಮಯದಲ್ಲಿ ಪತ್ರಿಕೆಯನ್ನು ಹಾಜರುಪಡಿಸುವುದು ಅಸಾದ್ಯವಾಗಿರುತ್ತದೆ. ಈ ಕಾರಣಕ್ಕಾಗಿ ಮತದಾನದ ಹಕ್ಕನ್ನು ತಿರಸ್ಕರಿಸುವುದು ಕಾನೂನು ಬಾಹಿರವಾಗಿರುತ್ತದೆ.
ಹಾಗೆಯೇ, ಸದಸ್ಯತ್ವ ನೋಂದಣಿ ಮಾಡುವಾಗ, ಮಹಾಸಭೆಯು ಯಾವುದೇ ಸದಸ್ಯರ ಭಾವಚಿತ್ರ ಅಥವಾ ಗುರುತಿನ ದಾಖಲೆಯನ್ನು ಪಡೆದಿರುವುದಿಲ್ಲ. ಇಂತಹ ಸಂದರ್ಭದಲ್ಲಿ, ದಾಖಲೆಯ ಪ್ರತಿಯನ್ನು ಮೂಲ ಪ್ರತಿಯಿಲ್ಲದೇ ಗುರುತಿಸಲು ಅಸಾಧ್ಯ ಮತ್ತು ಒಂದೇ ರೀತಿಯ ಹೆಸರನ್ನು ಹೊಂದಿದ ವ್ಯಕ್ತಿಗಳು ತಮ್ಮ ಗುರುತಿನ ದಾಖಲೆಯ ಪ್ರತಿಯೊಂದಿಗೆ ಬಂದು ನಕಲಿ ಮತದಾನಕ್ಕೆ ಅವಕಾಶವಾಗುತ್ತದೆ.
೪. ಮಹಾಸಭೆಯು ೧೫೦೦೦ ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದ್ದು, ಭಾರತದಾದ್ಯಂತ ಮತ್ತು ಹೊರದೇಶಗಳಲ್ಲಿ ವಾಸಿಸುತ್ತಿದ್ದು, ಸೂಕ್ತ ಸಂಖ್ಯೆಗಳಲ್ಲಿ ಆಯಾ ಪ್ರಾಂತ್ಯವಾರು ಮತದಾನ ಕೇಂದ್ರಗಳ ಅವಶ್ಯಕತೆಯಿದ್ದು, ಆ ಬಗ್ಗೆ ಚುನಾವಣಾ ಅಧಿಸೂಚನೆಯಲ್ಲಿ ಯಾವುದೇ ಮಾಹಿತಿ ಇರುವುದಿಲ್ಲ. ಹೊರಭಾಗಗಳ ಮತದಾರರಿಗೆ ಅಂಚೆ ಮತದಾನದಂತಹ ಸೂಕ್ತ ವ್ಯವಸ್ಥೆ ಮಾಡಲು ತಮ್ಮಲ್ಲಿ ವಿನಂತಿಸುತ್ತಿದ್ದೇನೆ.
ಈ ಮೇಲಿನ ಎಲ್ಲಾ ಅಂಶಗಳನ್ನು ತಾವು ಕೂಲಂಕುಷವಾಗಿ ಪರಿಶೀಲಿಸಿ, ಎಲ್ಲಾ ನ್ಯೂನ್ಯತೆಗಳನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಂಡು, ಮುಕ್ತ ನಿರ್ಭೀತ ಮತದಾನಕ್ಕೆ ಅವಕಾಶ ಮಾಡಿಕೊಡಬೇಕಾಗಿ ಒತ್ತಾಯಪೂರ್ವಕವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ ಮತ್ತು ಈ ಮೇಲಿನ ಸಮಸ್ಯೆಗಳಿಗೆ ಕೈಗೊಂಡ ಕ್ರಮಗಳ ಬಗ್ಗೆ ದಿನಾಂಕ ೧೫/೧೦/೨೦೧೩ ರ ಒಳಗಾಗಿ ಸೂಕ್ತವಾದ ಲಿಖಿತ ಉತ್ತರವನ್ನು ತಮ್ಮಿಂದ ಬಯಸುತ್ತೇನೆ.

No comments:

Post a Comment