Friday, October 11, 2013

ಹವ್ಯಕರ ಸಂಘಟನೆಯ ಚುನಾವಣೆ

ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) ಬೆಂಗಳೂರು - ಹವ್ಯಕರ ಈ ಸಂಘಟನೆಯ ಚುನಾವಣೆ 

ಪ್ರಕ್ರಿಯೆಗಳು ಜಾರಿಯಲ್ಲಿರುವದು ತಮಗೆಲ್ಲ ಗೊತ್ತಿದೆಯಷ್ಟೇ. ಸಂಘಟನೆಯ ಹಾಲಿ ಪದಾಧಿಕಾರಿ 

ಸದಸ್ಯರೊಬ್ಬರು ಮಹಾಸಭೆಯ ಕಾರ್ಯಾಲಯವನ್ನು ತಮ್ಮ ಚುನಾವಣಾ ಲಾಭದ ದೃಷ್ಟಿಯಿಂದ 

ದುರುಪಯೋಗಪಡಿಸಿಕೊಳ್ಳುತ್ತಿರುವದು ಗಮನಕ್ಕೆ ಬಂದಿದೆ. ಈ ಕುರಿತು ಹೆಚ್ಚಿನ ವಿವರ ನಿರೀಕ್ಷಿಸಿ.

ದೊರೆತಿರುವ ಚುನಾವಣಾ ಅವಕಾಶವನ್ನು ಸದುಪಯೋಗಗೊಳಿಸಿ, ಅರ್ಹರನ್ನು ಆಯ್ಕೆ ಮಾಡಿ.



The election for the posts of Directors of Shree Akhila Havyaka Mahasabha (R), Bangalore is to be held on 20 th October, Sunday. There are nine candidates in the fray for the four vacant posts. I am one of the candidates. Today, I have met the election officer Shri. G K Bhat and submitted an appeal that is considered favorably.

Please, study the copy of that application given below.



ಗೆ,
ದಿನಾಂಕ: ೧೧. ೧೦. ೨೦೧೩ 

ಶ್ರೀ . ಜಿ. ಕೆ ಭಟ್ಟ 

ಚುನಾವಣಾಧಿಕಾರಿಗಳು 

ಶ್ರೀ ಅಖಿಲ ಹವ್ಯಕ ಮಹಾಸಭಾ ( ರಿ ) ಬೆಂಗಳೂರು. 

೨೦. ೧೦. ೨೦೧೩ ರಂದು ನಡೆಯಲಿರುವ ಶ್ರೀ ಅಖಿಲ ಹವ್ಯಕ ಮಹಾಸಭೆಯ ಚುನಾವಣೆಯಲ್ಲಿ ಮಹಾಸಭೆಯ ಹಾಲಿ ಪದಾಧಿಕಾರಿ ಶ್ರೀ ಪ್ರಶಾಂತಕುಮಾರ ಜಿ ಭಟ್ಟ ರವರು ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದವರಾಗಿದ್ದಾರೆ. ಅವರು ಮಹಾಸಭೆಯ ಕಾರ್ಯಾಲಯವನ್ನು ತಮ್ಮ ಚುನಾವಣೆ ಗೆಲುವಿಗಾಗಿ ಅನಧಿಕ್ರತವಾಗಿ ಬಳಸುತ್ತಿರುವದು , ಸಭೆನಡೆಸುವದುಇತ್ಯಾದಿ ದುರುಪಯೋಗಗಳು ನನ್ನ ಗಮನಕ್ಕೆ ಬಂದಿವೆ. 

೧ ) ಆದ ಕಾರಣ ಚುನಾವಣೆ ಮುಗಿಯುವವರೆಗೆ ಶ್ರೀ ಪ್ರಶಾಂತಕುಮಾರ ಜಿ ಭಟ್ಟ ರವರು ಶ್ರೀ ಅಖಿಲ ಹವ್ಯಕ ಮಹಾಸಭಾ ಕಾರ್ಯಾಲಯ ಪ್ರವೇಶಿಸದಂತೆನೋಡಿಕೊಳ್ಳಬೇಕಾಗಿ ಶ್ರೀ ಅಖಿಲ ಹವ್ಯಕ ಮಹಾಸಭಾ ದ ಅದ್ಯಕ್ಷರಿಗೆ ಆಜ್ಞೆ ನೀಡಬೇಕಾಗಿ ಬೇಡಿಕೊಳ್ಳುತ್ತೇನೆ. ಮತ್ತು 

೨) ಶ್ರೀ ಅಖಿಲ ಹವ್ಯಕ ಮಹಾಸಭೆಯು ಸಾಮಾನ್ಯ ಸದಸ್ಯ ಅಭ್ಯರ್ಥಿಗೆ ನೀಡುವ ಸೌಲಭ್ಯವನ್ನಷ್ಟೇ ಅವರಿಗೂ ನೀಡುವಂತೆ ಶ್ರೀ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷರು , ಪದಾಧಿಕಾರಿಗಳು, ಕಾರ್ಯಾಲಯ ಸಿಬ್ಬಂದಿ ಎಲ್ಲರಿಗೂ ಆಜ್ಞೆ ನೀಡಬೇಕಾಗಿ ಬೇಡಿಕೊಳ್ಳುತ್ತೇನೆ. ಅಲ್ಲದೆ 

೩) ಈ ಚುನಾವಣೆ ಮುಗಿದು ಫಲಿತಾಂಶ ಘೋಶಣೆಯಾಗುವವರೆಗೆ ಶ್ರೀ ಪ್ರಶಾಂತಕುಮಾರ ಜಿ ಭಟ್ಟ ರವರು ಶ್ರೀ ಅಖಿಲ ಹವ್ಯಕ ಮಹಾಸಭಾ ಕಾರ್ಯಾಲಯ ಪ್ರವೇಶಿಸದಂತೆ ಪ್ರಶಾಂತಕುಮಾರ ರವರಿಗೆ ತಡೆಯಾಜ್ಞೆ ನೀಡಬೇಕಾಗಿ ಪ್ರಾರ್ಥಿಸುತ್ತೇನೆ. 

ತಮ್ಮ ವಿಶ್ವಾಸಿ,

ಹರಿಹರ ಎಸ್ ಭಟ್ಟ 

ಅಖಿಲ ಹವ್ಯಕ ಮಹಾಸಭಾ ಚುನಾವಣೆ ೨೦೧೩ ರ ಅಭ್ಯರ್ಥಿ . 

mobile no. 99450 04681






No comments:

Post a Comment